Tuesday, February 28, 2012

ನೆನಪು ಎಂಬ ನನ್ನ ಗೆಳೆಯನ ಕುರಿತು

ನೆನಪುಗಳು ಅನ್ನುವದು ಜೀವನದ ಕೊಂಡಿ ಇದ್ದಂತೆ , ಬಾಲ್ಯ , ಯೌವ್ವನ , ಮುಪ್ಪು ಈ ಮೂರರ ನಡುವಿನ , ಆಗಿಹೋದ ಘಟನೆಗಳನ್ನ ಕಟ್ಟಿಕೊಡುವ ಮೂಲವೇ ನೆನಪು , ನೆನಪು ಅನ್ನುವದು ಕನಸಿಗಿಂತ ಹಿರಿದಾದ ಪದ, ಕನಸು ಮುಂದಿನ ಭವಿಷ್ಯದ ಹೆಬ್ಬಾಗಿಲು ಆದ್ರೆ ನೆನಪೆಂಬುದು ಆ ಹೆಬ್ಬಾಗಿಲಿಗೆ ತೋರಣ ಇದ್ದಂತೆ , ಆ ದಿನದ ಹಬ್ಬ ಮುಗಿದರು , ಒಣಗಿರುವ ತೋರಣದ ಮೇಲಿರುವ ಹಸಿರು ಛಾಯೆಯೇ!! ನೆನಪು. ನಾವಿರುವ ತನಕ ನಮ್ಮ ನೆನಪು ಅಜರಾಮರ , ನಾಳೆ ನಾವು ಸತ್ತಾಗ ನಮ್ಮ ಗೋರಿಯಲ್ಲಿ ಅವು ಸ್ವತಂತ್ರ , ಸತ್ತ ನೆನಪುಗಳಲ್ಲಿ ನಿಜವ ಹುಡುಕಬೇಡಾ ಗೆಳಯ, ನೆನಪುಗಳು ನಮ್ಮ ಜೀವನದ ಸುಪ್ತ ನದಿಗಳಿದ್ದಂತೆ, ಆ ನದಿಯನ್ನು ನೀನು ಬರಿದು ಮಾಡುವದಾದರೆ ಜೀವ ಜಲವೆಂಬ ನಿನ ಜೀವಕ್ಕೆ ಮರು ಹುಟ್ಟು ಎಂಬ ನೆನಪಿಗೆ ಹಾಹಾಕಾರ ಎದ್ದಿತು ಜೋಕೆ?